About Constituency

Padmanabhanagara

Located earlier in the range of Uttarahalli Vidhanasabha Kshetra, Padmanabhanagar now has an entity and identity of its own – the Padmanabhanagara  Legislative constituency, with Banashankari and Padmanabhanagar as its two constituents. With the two constituents having four wards each, Padmanabhanagar constituency, therefore comprising a total of eight wards stands today as the best of its kind, which has been possible because of the knowledge, effort and zeal for life of its inhabitants.

Having the strength of such people, their administrative head has a lot in his list of achievements in the area. Standing firm in the decisions, the  dedication to effectively complete a task begun, readiness to  befriend any power for the welfare of the people, open-heartedness for all in need, with no record of a person going back with empty hands, such is the sensibility and strength of the MLA of Padmanabhanagar constituency, Mr. R. Ashok.

Be it the construction of a canal, the laying out of a tar road, or the repairing of lanes and by-lanes and streets, or the installing of streetlights, or the coming up of a community hall, or providing facilities to schools and other institutions, MLA R. Ashok is ever ready in plan and action. His way of responding to the needs of the people, not hesitating to lend an ear to the problems that the residents come to face have made him a respected and revered person around.

So much so, that his perseverance and persistence, his sense of duty have become the talk of the town, and not surprisingly, the people opine that if their MLA is here, their problems are solved soon enough.

Apart  from the basic facilities, Padmanabhanagar constituency boasts of state-of-the-art facilities, international level bus stands, renovated markets, improved roads, priority to effectively manage waste and sewage, self- employment measures for youth, relief measures for the under-employed, distribution of ration  cards, voters’ ID, and so on and so forth. And after so much, this is not the end, as MLA R. Ashok says, is just the beginning. His plan of action is immense, well-crafted and far-sighted.

SELF-RELIANCE:

MLA R. Ashok envisions the making the youth of his constituency self-dependent, so that they build a life of their own, be healthy and self-developed. And the progress that his constituency has come to witness is a telling tale of the vision becoming a mission and reality. Mass marriages, medical check-ups, sports facilities for children, self-employment opportunities are just some examples for the projects undertaken in this light.

PLAYGROUNDS:

‘A sound mind in a sound body’ is a statement that apparently MLA Ashok has taken seriously. Accordingly, well-facilitated and well-maintained playgrounds have been dedicated to the public in Padmanabhanagar constituency.

KADIRENAHALLI UNDERPASS:

Owing to the incidences of heavy traffic and resultant congestion on the roads passing through Kadirenahalli junction, there was an immediate need for an alternative. The plan of Kadirenahalli Underpass was the result of this necessity; but for long the construction work lagged. It was only because of the quick decision-making of MLA R. Ashok that this project reached till its final stages of construction. This has considerably reduced the traffic in the main roads.

BANASHANKARI TEMPLE:

Being one of the oldest places of worship in the city of Bengaluru, the Banashankari temple draws lakhs of devotees a day. Under the  able leadership of the MLA, necessary construction in and around the temple have been so meticulously done that there is no damage done to the original ambience.

REACHING THE CLOUDS AMBARA – CHUMBANA:

Clock towers are not new to the world, but the application of technology and the richness of knowledge to deserving places and people is our speciality. The newest landmark ‘Ambara Chumbana’, which literally translates to ‘kissing the sky’ is a 61 feet high, 3-faced clock tower which displays a different colour each day of the week; and emits a musical tone every half an hour. It has been so developed that its chimes are audible upto 3 sq,kms.

BANASHANKARI BUS TERMINUS:

What was once a swamp filled with garbage, sewage and a place swarming with mosquitoes, is now a brand-new bus terminus. Popularly known as Banashankari TTMC, this 32.25 crore project encompasses an area of 18.781 sq.m. and is widely recognised as a success.

ISRO LAYOUT BUS STAND:

This architectural wonder is what Padmanabhanagar has proudly paid tribute to the ISRO community. There are models of India’s satellite vehicles in the 10 crore terminus; and it was constructed in a matter of nine months on one acre.

SARVARUTHU SWIMMING POOL:

Constructed under Ganesh Mandir ward, Sarvaruthu swimming pool is one of its kind, of international standards. Located in Padmabhanagar, this project costing 10 crores has become a virtual reality, and is accessible to both amateur and professional swimmers.

CORPORATION WATER SUPPLY:

One of the often occurring problems in cities is the shortage of potable water. The far-sightedness of MLA R. Ashok has made it possible that no person faces this problem in Padmanabhanagar. The old, narrow water canals have been replaced by wide ones. Construction of water tanks, water supply by tankers are implemented under the supervision of MLA R. Ashok.

 


 

ಪದ್ಮನಾಭನಗರ

ಮೊದಲು ಉತ್ತರಹಳ್ಳಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿದ್ದ ಪದ್ಮನಾಭನಗರ, ವಿಧಾನಸಭಾ ಕ್ಷೇತ್ರಗಳ ಮರುವಿಂಗಡಣೆಯಲ್ಲಿ ‘ಪದ್ಮನಾಭನಗರ ವಿಧಾನಸಭಾ ಕ್ಷೇತ್ರ’ ವಾಗಿ ರೂಪುಗೊಂಡ ವಿಧಾನಸಭಾ ಕ್ಷೇತ್ರ.  ಇದರಲ್ಲಿ ಬನಶಂಕರಿ ಮತ್ತು ಪದ್ಮನಾಭನಗರ ಎಂಬ ಎರಡು ಉಪವಿಭಾಗಗಳು.  ಮತ್ತು ಈ ಉಪ ವಿಭಾಗಗಳಲ್ಲಿ ತಲಾ ನಾಲ್ಕು ವಾರ್ಡ್‌ಗಳಂತೆ ಒಟ್ಟು 8ವಾರ್ಡ್‌ಗಳನ್ನು ಒಳಗೊಂಡ ಪದ್ಮನಾಭನಗರ ಕ್ಷೇತ್ರ ಇಂದು ರಾಜ್ಯದಲ್ಲಿ ಅತ್ಯುತ್ತಮ ಮಾದರಿ ವಿಧಾನಸಭಾ ಕ್ಷೇತ್ರ ಎಂಬ ಹೆಸರು ಪಡೆಯಲು ಇಲ್ಲಿನ ಜನರ ಅದಮ್ಯ ಜೀವನೋತ್ಸಾಹ ಮತ್ತು ಅವರ ತಿಳುವಳಿಕೆಯೇ ಕಾರಣವಾಗಿದೆ.

ಹಿಡಿದ ಕೆಲಸವನ್ನು ಪಟ್ಟು ಬಿಡದೆ ಸಾಧಿಸುವ ಛಲ. ಜನಹಿತಕ್ಕಾಗಿ ಯಾವ ಶಕ್ತಿಯೊಂದಿಗೂ ರಾಜಿ ಮಾಡಿಕೊಳ್ಳದ ದೃಢಚಿತ್ತ.  ಸಾರ್ವಜನಿಕರಿಗಾಗಿ ಸದಾ ತೆರೆದಿರುವ ಅವರ ಮನೆಯ ಬಾಗಿಲು, ಎಂತಹ ಸಂದರ್ಭದಲ್ಲಿಯೂ ಸಹಾಯ ಯಾಚಿಸಿ ಬಂದವರಿಗೆ ಮುಚ್ಚಿಕೊಂಡಿಲ್ಲ.

ಕೊಳವೆ ಬಾವಿ ಕೊರೆಯುವ ಕೆಲಸವಾಗಲಿ, ರಸ್ತೆಗೆ ಡಾಂಬರು ಮಾಡಿಸುವುದರಿಂದ ಮೊದಲ್ಗೊಂಡು ರಸ್ತೆ ದುರಸ್ತಿಯ ಇನ್ನಾವುದೇ ಕೆಲಸವಾಗಲೀ, ಬೀದಿ ದೀಪದ ಅಳವಡಿಕೆಯಾಗಲೀ, ರಂಗಮಂದಿರ ನಿರ್ಮಾಣವಾಗಲೀ, ಶಾಲಾ ಮಕ್ಕಳಿಗೆ ಸೌಲಭ್ಯ ಕಲ್ಪಿಸುವ ವಿಚಾರವಾಗಲೀ, ಅಲ್ಲಿ ಅಶೋಕ ಅವರ ಉಪಸ್ತಿತಿ ಖಂಡಿತ. ಜನರ ನಾಡಿ ಬಡಿತಕ್ಕೆ ಸರಿಯಾಗಿ ಸ್ಪಂದಿಸುವ, ಅವರ ಅಹವಾಲುಗಳನ್ನು ಕಿಂಚಿತ್ತು ಬೇಸರವಿಲ್ಲದೆ ಆಲಿಸುವ ‘ಅಶೋಕ’ ರ ನಡವಳಿಕೆ ಜನಸಾಮಾನ್ಯರಿಗೆ ಅಚ್ಚುಮೆಚ್ಚು. ಅಶೋಕ ರವರಿದ್ದಾರೆ, ನಮ್ಮ ಸಮಸ್ಯೆ ಬಗೆಹರಿಯುತ್ತದೆಎನ್ನುವ ಭಾವನೆ ಜನಮನದಲ್ಲಿ ಮೂಡಿದ್ದರೆ, ಅದಕ್ಕೆ ಕಾರಣ ಅಶೋಕ ರವರ ಆಸ್ಥೆ ಮತ್ತು ಶ್ರದ್ಧೆ.  ಜನಸಮುದಾಯಕ್ಕೆ ಸ್ಪಂದಿಸುವ ಅವರ ಮನಸು ಮತ್ತು ಒಳಿತನ್ನು ಸಾಧಿಸಲೇಬೇಕು ಎನ್ನುವ ಅವರ ದೃಢ ನಿರ್ಧಾರ.

ಕ್ಷೇತ್ರದಲ್ಲಿ ಅಂತರರಾಷ್ಟ್ರೀಯ ದರ್ಜೆಯ ಬಸ್‌ನಿಲ್ದಾಣಗಳು, ಇರುವ ಎಲ್ಲ ಉದ್ಯಾನವನಗಳಿಗೆ ಕಾಯಕಲ್ಪ, ಆಟದ ಮೈದಾನಗಳ ನಿರ್ಮಾಣ, ಹಳೆಯ ಮಾರ್ಕೆಟ್‌ಗಳ ದುರಸ್ತಿ, ಪುನಶ್ಚೇತನ, ರಂಗಮಂದಿರಗಳ ನಿರ್ಮಾಣ, ರಸ್ತೆ ಅಭಿವೃದ್ಧಿ, ತ್ಯಾಜ್ಯ ನಿರ್ವಹಣೆಗೆ ನೀಡಿದ ಆದ್ಯತೆ, ಯುವಕರಿಗೆ ಸ್ವ-ಉದ್ಯೋಗ ಅವಲಂಬಿಸಲು ನೆರವು, ಪಡಿತರ ಚೀಟಿ ವಿತರಣೆ, ಹಕ್ಕುಪತ್ರ ವಿತರಣೆ ಹೀಗೆ ಅಶೋಕರಿಂದ ಸಾಧಿತವಾದ ಪ್ರಗತಿ ಕಾರ್ಯಗಳ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ.

ಸ್ವಾವಲಂಬನೆ:

ತಮ್ಮ ಕ್ಷೇತ್ರದ ಯವಕರು ಸ್ವಾವಲಂಬಿಗಳಾಗಬೇಕು, ಅವರದೇ ಬದುಕು ಕಟ್ಟಿಕೊಳ್ಳಬೇಕು, ಒಳ್ಳೆಯ ಆರೋಗ್ಯವಂತರಾಗಬೇಕು, ವಿಕಸಿತರಾಗಬೇಕು,ಅನ್ನುವ ಅಶೋಕ್ ರವರ ಇಂದಿನವರೆಗಿನ ಪ್ರಗತಿ ಸಾಕ್ಷಿಗಳೊದಗಿಸುತ್ತಿವೆ. ಸಾಮೂಹಿಕ ವಿವಾಹ, ಮಕ್ಕಳು, ಯುವಜನತೆಗೆ ಆರೋಗ್ಯ ತಪಾಸಣೆ, ಚಿಕ್ಕ ಮಕ್ಕಳಿಗೆ ಆಟದ ಸೌಲಭ್ಯಗಳು, ಯುವ ಜನತೆಗೆ ಸ್ವಾವಲಂಬನೆಯ ದೀಕ್ಷೆ ಇವು ನನಸಾದ ಕನಸುಗಳಾಗಿವೆ.

ಆಟದ ಮೈದಾನಗಳು:

ಆಟದ ಮೈದಾನಗಳು ಸಂಪೂರ್ಣ ದೈಹಿಕ ಬೆಳವಣಿಗೆಯ ಕೇಂದ್ರವಾಗಬೇಕು ಎನ್ನುವ ಶ್ರೀ ಅಶೋಕ್ ರವರ ಆಶಯ ಫಲ ನೀಡಿದೆ ಪದ್ಮನಾಭನಗರ ಕ್ಷೇತ್ರದ ಆಟದ ಮೈದಾನಗಳು ಈಗ ಎಲ್ಲರ ಅಚ್ಚು ಮೆಚ್ಚಿನ ತಾಣ.

ಕದಿರೇನಹಳ್ಳಿ ಅಂಡರ್ ಪಾಸ್:

ಕದಿರೇನಹಳ್ಳಿ ಜಂಕ್ಷನ್‌ನ ಮೂಲಕ ಹಾದು ಹೋಗುವ ರಿಂಗ್ ರಸ್ತೆಯಲ್ಲಿ ಸದಾ ವಾಹನ ದಟ್ಟಣೆ. ಈ ವಾಹನದಟ್ಟಣೆಯನ್ನು ನಿವಾರಿಸುವ ಸಲುವಾಗಿ ಅಂಡರ್ ಪಾಸ್ ನಿರ್ಮಾಣಕ್ಕೆ ಯೋಜನೆ ರೂಪಿಸಿತ್ತಾದರೂ ಅದು ನಿಧಾನಗತಿಯಲ್ಲಿ ಕಾರ್ಯರೂಪಕ್ಕೆ ಬರುತ್ತಿದ್ದುದು ಜನರಿಗೆ ಒಂದು ತಲೆನೋವಾಗಿತ್ತು, ಶ್ರೀ ಅಶೋಕ ರವರು ಕೈಗೊಂಡ ಕ್ರಮಗಳು ಮತ್ತು ನಿರ್ಧಾರದಿಂದಾಗಿ ಈ ಅಚಿಡರ್‌ಪಾಸ್ ನಿರ್ಮಾಣ ಅಂತಿಮ ಹಂತ ತಲುಪಿತು. ಈಗ ಇದು ವರ್ತುಲ ರಸ್ತೆಯಲ್ಲಿನ ವಾಹನ ದಟ್ಟಣೆಯನ್ನು ಸರಳಗೊಳಿಸಿರುವುಸಲ್ಲದೆ ನಾಗರಿಕರಿಗೆ ಅತ್ಯುಪಯುಕ್ತ ರಸ್ತೆಯಾಗಿ ಪರಿಣಮಿಸಿದೆ.

ಬನಶಂಕರಿ ದೇವಸ್ಥಾನ:

ಬೆಂಗಳೂರಿನ ಪುರಾತನ ದೇವಾಲಯಗಳಲ್ಲಿ ಒಂದಾದ ಬನಶಂಕರಿ ದೇವಸ್ಥಾನ ಲಕ್ಷ ಲಕ್ಷ ಸಂಖ್ಯೆಯಲ್ಲಿ ಜನರನ್ನು ಸೆಳೆವ ತಾಣ. ಈ ಪುರಾತನ ದೇಗುಲಕ್ಕೆ ಆಧುನಿಕ ಸ್ಪರ್ಶ ಸಾಂಪ್ರದಾಯಕತೆಗೆ ಕಿಂಚಿತ್ತೂ ಧಕ್ಕೆ ಬರದಂತೆ ದೇವಾಲಯವನ್ನು ಸುಸ್ಥಿರಗೊಳಿಸಿರುವುದು ಅಶೋಕ ರವರ ಮುಂದಾಳತ್ವದಲ್ಲಿ ನಡೆದ ಮಹತ್ವ ಪೂರ್ಣಕೆಲಸಗಳಲ್ಲೊಂದು.

ಅಂಬರ ಚುಂಬನ:

ಕ್ಲಾಕ್ ಟವರ್‌ಗಳ ನಿರ್ಮಾಣ ನಮಗೆ ಹೊಸದಲ್ಲ. ಆದರೆ ಎಲ್ಲ ಆಧುನಿಕ ಸಂಶೋಧನೆ, ಜ್ಞಾನದ ವೈವಿದ್ಯ ವನ್ನು ಒಂದೆಡೆ ಸೇರಿಸುವುದು ನಮ್ಮ ವೈಶಿಷ್ಟ್ಯ. ಬೆಂಗಳೂರಿನ ಹೊಸ ಲ್ಯಾಂಡ್ ಮಾರ್ಕ್ ‘ಅಂಬರ ಚುಂಬನ’ 3 ಮುಖಗಳುಳ್ಳ, ಪ್ರತಿದಿನ ಬೇರೆ ಬಣ್ಣ ಪಡೆದುಕೊಳ್ಳುವ ಪ್ರತಿ ಅರ್ದ ಘಂಟೆಗೊಮ್ಮೆ ಮಧುರ ನಿನಾದದೊಂದಿಗೆ ಗಂಟೆ ಬಾರಿಸುತ್ತ ನಾಗರಿಕರಿಗೆ ಸಮಯ ತಿಳಿಸುವ ಈ ಗಡಿಯಾರ ಇಂದು ಬೆಂಗಳೂರಿನ ಹೆಮ್ಮೆ. ಸುತ್ತಲ 3 ಕಿ ಮೀ ವರೆಗೆ ಕೇಳಿಸುವ ಈ ಗಡಿಯಾರದ ಘಂಟಾ ನಿನಾದ ಕಿವಿಗಿಂಪು. ಗಡಿಯಾರದ ನೋಟ ಕಣ್ಣಿಗೆ ತಂಪು.

ಬನಶಂಕರಿ ಸಾರಿಗೆ ಸಂಕೀರ್ಣ:

ಒಂದು ಕಾಲದಲ್ಲಿ ಕಸ ಸುರಿಯುವ ಗುಂಡಿಯಾಗಿದ್ದ, ಕೊಳೆ, ತ್ಯಾಜ್ಯಗಳು, ನಿಂತ ನೀರು, ಗುಂಯ್ ಗುಡುವ ಸೊಳ್ಳೆಗಳ ಆಗರವಾಗಿದ್ದ ತಾಣ ಈಗ ಅತ್ಯಾಧುನಿಕ ಬಸ್ ಟರ್ಮಿನಸ್. ಬನಶಂಕರಿ TTMC ಎಂದೇ ಖ್ಯಾತವಾದ ಈ ಬಸ್ ನಿಲ್ದಾಣ ೩೨.೨೫ ಕೋಟಿ ರೂ ಗಳ ವೆಚ್ಚದಲ್ಲಿ ತಲೆಯೆತ್ತಿ ನಿಂತಿದೆ. ನಮ್ಮ ಇಂಜನೀರಿಂಗ್ ಕೌಶಲ್ಯಕ್ಕೆ ಸಾಕ್ಷಿಯಾಗಿದೆ. 18.781 ಚ ಮೀ ವ್ಯಾಪ್ತಿಯ ಈ ಬಸ್ ನಿಲ್ದಾಣ, ಬೆಂಗಳೂರಿನಲ್ಲಿಯೇ ಅತಿ ದೊಡ್ಡ ಬಡಾವಣೆಯನ್ನು, ಇತರ ಭಾಗಗಳೊಂದಿಗೆ ಬೆಸೆವ ಸದಾ ಚಟುವಟಿಕೆಯಿಂದ ಕೂಡಿದ ಸಾರಿಗೆ ಕೇಂದ್ರ.

ಇಸ್ರೋ ಲೇಔಟ್ ಬಸ್ ನಿಲ್ದಾಣ:

ಈ ನಿಲ್ದಾಣ ನಾಡಿನ ಗಗನ ವಿಜ್ಞಾನಿ ಸಮುದಾಯಕ್ಕೆ ಪದ್ಮನಾಭನಗರ ವಿಧಾನಸಭಾಕ್ಷೇತ್ರ ಸಲ್ಲಿಸಿದ ಗೌರವದ ಪ್ರತೀಕ. ನಮ್ಮ ದೇಶದ ಉಪಗ್ರಹ ವಾಹನಗಳ ಪ್ರತಿರೂಪವನ್ನು ಪಡೆದಿರುವ ಈ ಬಸ್ ನಿಲ್ದಾಣ, ತನ್ನ ಸೌಂದರ್ಯಪ್ರಜ್ಞೆ ಮತ್ತು ಆಧುನಿಕ ಸೌಲಭ್ಯಗಳ ಫಲವಾಗಿ ಇಂದು ಬೆಂಗಳೂರಿನ ಪ್ರತಿಷ್ಠಿತ ಬಸ್ ನಿಲ್ದಾಣಗಳಲ್ಲಿ ಒಂದು, ಇಲ್ಲಿ ಬರುವ ಪ್ರಯಾಣಿಕರಿಗೆ ಅತ್ಯುತ್ತಮ ಅನುಭವ ನೀಡುವ ಈ ಬಸ್ ನಿಲ್ದಾಣ ತನ್ನ ಸಮರ್ಥ ಸೇವೆಗಾಗಿ ಖ್ಯಾತ.

ಅಂತರರಾಷ್ಟ್ರೀಯ ಮಟ್ಟದ ಈಜುಕೊಳ:

ಗಣೇಶ ಮಂದಿರ ವಾರ್ಡ್‌ನಲ್ಲಿ ನಿರ್ಮಿಸಲಾಗಿರುವ ಈಜುಕೊಳ, ಬೆಂಗಳೂರಿನಲ್ಲೆ ಏಕೆ ಇಡೀ ದೇಶದಲ್ಲಿಯೇ ಅತ್ಯುತ್ತಮವಾದದ್ದು. 10 ಕೋಟಿ ರೂಗಳ ವೆಚ್ಚದಲ್ಲಿ ನಿರ್ಮಾಣವಾಗಿರುವ ಈ ‘ಸರ್ವಋತು’ ಈಜುಕೊಳ, ಹವ್ಯಾಸಿಗಳಿಗೆ ವೃತ್ತಿಪರ ಈಜುಗಾರರಿಗೆ ಒದಗಿಸುವ ಸೌಲಭ್ಯ ಅತ್ಯಂತ ಉನ್ನತ ಗುಣಮಟ್ಟದ್ದು, ಅಂತರರಾಷ್ಟ್ರೀಯ ಮಟ್ಟದ ಈಜುಕೊಳ ಹೊಂದಿದ ಹೆಮ್ಮೆ ಈಗ ಪದ್ಮನಾಭನಗರ ವಿಧಾನಸಭಾಕ್ಷೇತ್ರದ್ದು.

ಪಾರ್ಕ್/ ಆಟದ ಮೈದಾನ:

ಪ್ರತಿ ಉದ್ಯಾನವನವೂ ಬಹೂಪಯೋಗಿ ಆಗಬೇಕು ವಿಶೇಷವಾಗಿ ಮಕ್ಕಳ ಆಟಪಾಟಗಳಿಗೆ ಪ್ರಶಸ್ತವಾಗಿರಬೇಕು ಎನ್ನುವ ಶ್ರೀ ಅಶೋಕ ರವರ ದೃಷ್ಟಿಕೋನ ಈಗ ಫಲ ನೀಡಿದೆ. ಇಲ್ಲಿನ ಉದ್ಯಾನವನಗಳು ಮಕ್ಕಳಿಗೆ, ವೃದ್ದರಿಗೆ, ವ್ಯಾಯಮ ನಿರತರಿಗೆ, ಕ್ರೀಡಾಸಕ್ತರಿಗೆ, ಎಲ್ಲರಿಗೂ ಅಚ್ಚುಮೆಚ್ಚು.

ರಸ್ತೆ ನಿರ್ಮಾಣ:

ರಸ್ತೆಗಳು ಸಮಾಜದ ಸ್ಥಿತಿಯನ್ನು ಬಿಂಬಿಸುತ್ತದೆ ಎನ್ನುವುದೊಂದು ಮಾತು. ಪದ್ಮನಾಭನಗರ ಕ್ಷೇತ್ರದಲ್ಲಿ ಸಜ್ಜುಗೊಂಡ ರಸ್ತೆಗಳು. ಒಳಚರಂಡಿ ವ್ಯವಸ್ತೆ. ನಮ್ಮ ಕ್ಷೇತ್ರ ಕಂಡಿರುವ ಅದ್ಭುತ ಪ್ರಗತಿಯನ್ನು ಸಾರಿ ಹೇಳುತ್ತಿವೆ.

ನೀರು ಸರಬರಾಜು ಯೋಜನೆ:

ಪದ್ಮನಾಭನಗರ ವಿಧಾನ ಸಭಾಕ್ಷೇತ್ರದ ಜನರೆಂದೂ ಕುಡಿಯುವ ನೀರಿನ ಸಮಸೈಯಿಂದ ಬಳಲಿಲ್ಲ. ಇದಕ್ಕೆ ಕಾರಣ ಮುಂದಾಲೋಚನೆ ವಹಿಸಿ ಕೈಗೊಂಡ ಕುಡಿಯುವ ನೀರಿನ ಯೋಜನೆಗಳು. ಹಳೆಯ ಮತ್ತು ಚಿಕ್ಕ ವ್ಯಾಸದ ಕೊಳವೆಗಳನ್ನು ಬದಲಾಯಿಸಿ ಹೆಚ್ಚಿನ ವ್ಯಾಸದ ಕೊಳವೆಗಳ ಅಳವಡಿಕೆ, ನೀರಿನ ಟ್ಯಾಂಕಗಳ ನಿರ್ಮಾಣ, ಟ್ಯಾಂಕರುಗಳ ನೀರು ಪೂರೈಕೆ, ಹಾಗೂ ಇತರ ದೂರದೃಷ್ಟಿಯ ಯೋಜನೆಗಳನ್ನು ಈ ಮೂಲಕ ಕ್ಷೇತ್ರದಲ್ಲಿ ಕೈಗೊಳ್ಳಲಾಗಿದೆ.

ರೇಷನ್ ಕಾರ್ಡ್ ವಿತರಣೆ:

ಮಾನವೀಯ ಅನುಕಂಪ ಮತ್ತು ಅವಕಾಶ ವಂಚಿತರಿಗೆ ಸದಾವಕಾಶಗಳನ್ನು ಒದಗಿಸುವುದು ಯಾವುದೇ ಆಡಳಿತಗಾರನ ಹೋಣೆಯಾಗಬೇಕು ಎನ್ನುವುದು ಶ್ರೀ ಆಶೋಕ ರವರ ಅಭಿಪ್ರಾಯ, ಹಾಗಾಗಿಯೇ ಪದ್ಮನಾಭನಗರ ಕ್ಷೇತ್ರದಲ್ಲಿ ಸಮಾಜ ಕಲ್ಯಾಣ ಕಾರ್ಯ ಗಳಿಗೆ ಪ್ರಥಮಾದ್ಯತೆ.

ಪದ್ಮನಾಭ ನಗರದ ನನ್ನೆಲ್ಲಾ ಬಂಧುಗಳೆ,

ಕಳೆದ ಐದು ವರ್ಷಗಳಿಂದ ನಿಮ್ಮ ಸೇವೆಯಲ್ಲಿ ನಿರತನಾಗಿದ್ದೇನೆ.  ಕಳೆದ ಚುನಾವಣೆಯಲ್ಲಿ ನನ್ನನ್ನು ಆರಿಸಿ ಕಳುಹಿಸಿದ ನಿಮ್ಮ ನಂಬಿಕೆಗೆ ಕಿಂಚಿತ್ತೂ ಚ್ಯುತಿ ಬರದಂತೆ ದುಡಿದು ಪದ್ಮನಾಭನಗರದ ಸರ್ವಾಂಗೀಣ ಬೆಳವಣಿಗೆಗೆ ಶ್ರಮಿಸಿದ್ದೇನೆ. ಅದಕ್ಕೆ ಕಾರಣ ನಿಮ್ಮ ತುಂಬು ಮನದ ಆಶೀರ್ವಾದ ಮತ್ತು ಬೆಂಬಲವೇ ಎಂದು ನಾನು ನಂಬಿದ್ದೇನೆ.

ಪದ್ಮನಾಭನಗರವನ್ನು ನಾಡಿನಲ್ಲಿಯೇ ಅತ್ಯುತ್ತಮವಾದ ವಿಧಾನಸಭಾಕ್ಷೇತ್ರವನ್ನಾಗಿ ರೂಪಿಸಬೇಕು ಎನ್ನುವುದು ನನ್ನ ಅನುಗಾಲದ ಕನಸಾಗಿತ್ತು.  ಈ ಕನಸನ್ನು ನಿಜಮಾಡುವ ನಿಟ್ಟಿನಲ್ಲಿ ಈ ಕ್ಷೇತ್ರದಲ್ಲಿ ಕೈಗೊಳ್ಳಲಾದ ಅಭಿವೃದ್ಧಿ ಕಾರ್ಯಗಳ ನೋಟವನ್ನು ನಿಮ್ಮ ಮುಂದಿಡಲು ಪ್ರಯತ್ನಿಸಿದ್ದೇನೆ. ಎಲ್ಲ ಬೆಳವಣಿಗೆಗಳೂ ನಿಮ್ಮ ಕಣ್ಣ ಮುಂದಿವೆ. ಪದ್ಮನಾಭನಗರ ಕಂಡ ರೂಪಾಂತರವನ್ನು ತಾವೆಲ್ಲರೂ ಕಣ್ಣಾರೆ ಕಂಡು ನನ್ನ ಬೆನ್ನು ತಟ್ಟಿದ್ದೀರಿ. ಇದುವರೆಗೆ ಇಂತಹ ಬೆಳವಣಿಗೆಯನ್ನು ಕಂಡಿಲ್ಲ, ಇದನ್ನು ತಂದವ ನಿರಂತರವಾಗಿ ನಮ್ಮೊಡನಿರಲಿ ಎಂದು ಆಶೀರ್ವದಿಸಿದ್ದೀರಿ.

ಪ್ರಿಯ ಜನರೆ, ಚುನಾವಣೆಗಳು ಮುಂದಿವೆ. ಮುಂದಿನ ಐದು ವರ್ಷಗಳಲ್ಲಿ ಇದೇ ರೀತಿ ನಿಮ್ಮ ಸೇವೆಯನ್ನು ಮುಂದುವರಿಸಲು ಅವಕಾಶ ನೀಡಿ ಎನ್ನುವ ವಿನಮ್ರ ವಿನಂತಿ ನನ್ನದು. ಬೆಳವಣಿಗೆ ನಿಂತನೀರಲ್ಲ. ಅದು ನಿರಂತರವಾಗಿ ನಡೆಯಬೇಕಾದ ಪ್ರಕ್ರಿಯೆ. ಅದಕ್ಕೆ ಬೇಕಾದದ್ದು ಇಚ್ಛಾಶಕ್ತಿ ಮತ್ತು ಜನಪರ ಕಾಳಜಿ ಮಾತ್ರ. ದಯಮಾಡಿ ನಿಮ್ಮ ಶುಭಾಶೀರ್ವಾದ ಮತ್ತು ಶುಭ ಹಾರೈಕೆಗಳನ್ನು ಈ ಚುನಾವಣೆಯಲ್ಲಿ ನನಗೆ ಮತ ನೀಡುವ ಮೂಲಕ ನನಗೆ ಆಶೀರ್ವಾದ ಮಾಡಿ.

ಆರ್.ಅಶೋಕ.
ಶಾಸಕರು, ಪದ್ಮನಾಭನಗರ.
ಹಾಗೂ ಉಪ ಮುಖ್ಯಮಂತ್ರಿಗಳು.
“ಕನ್ನಡವೇ ಹಸಿರು ಕನ್ನಡವೇ ಉಸಿರು”

Related Websites

  • Bharatiya Janata Party
  • BJP Karnataka
  • Sri L.K. Advani
  • Sri Narendra Modi
  • Sri Ananth Kumar
  • Sri D.V. Sadananda Gowda
  • Sri Jagadish Shettar

Subscribe Newsletter

Share your Opinion

Please Send your valuable opinions, ideas or any queries. We welcome your Suggestions

Click Here to Submit