ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಸಾಧನೆಗಳು

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ

ಕೇಂದ್ರ ಕಛೇರಿ: ಬೆಂಗಳೂರು

ವಿಷಯ: ಸರ್ಕಾರವು ಅಧಿಕಾರಕ್ಕೆ ಬಂದ ನಂತರ ಇಲ್ಲಿಯವರೆಗೆ ಸಾಧಿಸಿದ ಅಭಿವೃದ್ಧಿ ಕಾರ್ಯಗಳ ಪ್ರಗತಿ ವರದಿ

ಕ.ರಾ.ರ.ಸಾ.ನಿಗಮವು ದೇಶದ ಸಾರಿಗೆ ನಿಗಮಗಳಲ್ಲಿಯೇ ಅಗ್ರಗಣ್ಯ ಸಾರಿಗೆ ನಿಗಮವಾಗಿ ಹೊರಹೊಮ್ಮಿದ್ದು, ಸಾರಿಗೆ ಕ್ಷೇತ್ರದಲ್ಲಿ ಹೊಸ ಆಯಾಮ ಸೃಷ್ಟಿಸಿದೆ. ಇಲ್ಲಿಯತನಕ ನಿಗಮವು ರೂ. 8935 ಕೋಟಿ ಆದಾಯಗಳಿಸಿ ರೂ. 156 ಕೋಟಿ ಲಾಭಗಳಿಸಿರುತ್ತದೆ.

ನಿಗಮವು ವಿಶ್ವದರ್ಜೆಯ ವಿವಿಧ ವಿನ್ಯಾಸದ ವೋಲ್ವೋ, ವೋಲ್ವೋ ಮಲ್ಟಿ ಆಕ್ಸೆಲ್, ಮರ್ಸಿಡಿಜ್ ಬೆಂಜ್, ಮರ್ಸಿಡಿಜ್ ಬೆಂಜ್ ಮಲ್ಟಿ ಆಕ್ಸೆಲ್, ಕರೋನ, ಕರೋನ ಸ್ಲೀಪರ್‌ಗಳನ್ನು ಒಳಗೊಂಡಂತೆ ಒಟ್ಟು ರೂ. 799.00 ಕೋಟಿ ವೆಚ್ಚದಲ್ಲಿ 4288 ಹೊಸ ಬಸ್ಸುಗಳನ್ನು ಸೇರ್ಪಡೆಗೊಳಿಸಲಾಗಿದ್ದು (ಜೆ.ಎನ್.ಎನ್.ಯು.ಆರ್.ಎಂ. ವಾಹನ ಹೊರತುಪಡಿಸಿ), 2783 ಹಳೆಯ ವಾಹನಗಳನ್ನು ರದ್ದುಗೊಳಿಸಲಾಗಿರುತ್ತದೆ. ಸಾರ್ವಜನಿಕರಿಗೆ ಉತ್ಕೃಷ್ಟಮಟ್ಟದ ಸೇವೆಯನ್ನು ಒದಗಿಸುವ ಸಲುವಾಗಿ ವೋಲ್ವೋ ಮಲ್ಟಿ ಆಕ್ಸೆಲ್ ವಾಹನಗಳನ್ನು ಹೊಸದಾಗಿ ಸೇರ್ಪಡೆಗೊಳಿಸಿ, ಅಂತರಾಷ್ಟ್ರೀಯ ಜಾಹೀರಾತು ಸಂಸ್ಥೆಯಿಂದ ಹೊರಾಂಗಣ ಹಾಗೂ ಒಳಾಂಗಣವನ್ನು ವಿನ್ಯಾಸಗೊಳಿಸಿ ‘ಐರಾವತ ಕ್ಲಬ್ ಕ್ಲಾಸ್’ ಎಂದು ಬ್ರ್ಯಾಂಡ್ ಮಾಡಲಾಗಿದೆ.

ದೇಶದಲ್ಲೇ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು ನರ್ಮ್ ಯೋಜನೆಯಡಿಯಲ್ಲಿ ಘೋಷಿಸಿದ ಯೋಜನೆಗಳನ್ನು ಅತ್ಯಂತ ದಕ್ಷತೆ ಹಾಗೂ ತ್ವರಿತಗತಿಯಲ್ಲಿ ಸದುಪಯೋಗಪಡಿಸಿಕೊಳ್ಳುವಲ್ಲಿ ಪ್ರಥಮ ಸಾರಿಗೆ ನಿಗಮವೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ಯೋಜನೆಯಡಿ ರೂ.50.30 ಕೋಟಿ ವೆಚ್ಚದಲ್ಲಿ 150 ಲೋ-ಫ್ಲೋರ್ ಬಸ್ಸುಗಳನ ಆಂತರಿಕವಾಗಿ ವಿನ್ಯಾಸಗೊಳಿಸಿ ಮೈಸೂರು ನಗರದಲ್ಲಿ ಕಾರ್ಯಚರಣೆಗೊಳಿಸಲಾಗುತ್ತಿದೆ. ಸದರಿ ಬಸ್ಸಿನ ಮಾದರಿಯನ್ನು ಕೇಂದ್ರ ಸರ್ಕಾರವು ಅತ್ಯುತ್ತಮ ಮಾದರಿಯೆಂದು ಪ್ರಶಂಸಿಸಿ, ಇತರೆ ನರ್ಮ್ ನಗರಗಳಲ್ಲಿಯೂ ಅಳವಡಿಸಿಕೊಳ್ಳಲು ಸೂಚಿಸಿರುತ್ತದೆ. (ಛಾಯಾಚಿತ್ರವನ್ನು ಅನುಬಂಧ-ಅ ನಲ್ಲಿ ಲಗತ್ತಿಸಿದೆ)

ನರ್ಮ್ ಯೋಜನೆಯಡಿ, ಮೈಸೂರು ನಗರದ ಪ್ರಮುಖ ಏಳು(7) ಸ್ಥಳಗಳಲ್ಲಿ ಅತ್ಯಾಧುನಿಕ ಸುಸಜ್ಜಿತ ಸೌಲಭ್ಯಗಳನ್ನು ಒಳಗೊಂಡ ಬಸ್ ನಿಲ್ದಾಣಗಳನ್ನು ರೂ.110.16 ಕೋಟಿಗಳ ವೆಚ್ಚದಲ್ಲ್ಲಿ ನಿರ್ಮಿಸಲಾಗುತ್ತಿದ್ದು, ಈಗಾಗಲೇ 6 ಬಸ್ ನಿಲ್ದಾಣಗಳನ್ನು ಸಾರ್ವಜನಿಕರ ಸೇವೆಗಾಗಿ ಪ್ರಾರಂಭಿಸಲಾಗಿದೆ.

ಸಾರ್ವಜನಿಕರಿಗೆ ಇನ್ನೂ ಹೆಚ್ಚಿನ ಉತ್ಕೃಷ್ಟಮಟ್ಟದ ಸೇವೆಯನ್ನು ಒದಗಿಸುವ ಸಲುವಾಗಿ ಬಸ್ಸಿನಲ್ಲಿಯೇ ರಾಸಾಯನಿಕ ಶೌಚಾಲಯ ಹಾಗೂ ಅಡಿಗೆ ಮನೆ ಹೊಂದಿರುವ ಐರಾವತ ಬ್ಲಿಸ್ ಹಾಗೂ ಕೇವಲ ರಾಸಾಯನಿಕ ಶೌಚಾಲಯ ಹೊಂದಿರುವ ಐರಾವತ ಸುಪೀರಿಯಾ ಹೆಸರಿನ ನೂತನ ಐಷಾರಾಮಿ ಬಸ್ಸುಗಳನ್ನು ದಿನಾಂಕ 18-07-2012ರಂದು ವಾಹನ ಸಮೂಹಕ್ಕೆ ಸೇರ್ಪಡೆಗೊಳಿಸಲಾಗಿದೆ. ಇದಲ್ಲದೆ ಪ್ರಾಯೋಗಿಕವಾಗಿ ದೇಶದ ಅತಿ ಉದ್ದದ ಮಲ್ಟಿ ಆಕ್ಸಲ್ ಬಸ್ ‘ವೋಲ್ವೋ 9400 ಪಿಎಕ್ಸ್’ನ್ನು ದಿನಾಂಕ 04-09-2012ರಂದು ಪ್ರಾರಂಭಿಸಲಾಗಿದೆ.

ಕ.ರಾ.ರ.ಸಾ.ನಿಗಮವು ಮಾರುಕಟ್ಟೆ ವಿಭಜನೆ ಪ್ರಕ್ರಿಯೆಯನ್ನು ಕೈಗೊಂಡ ಪ್ರಥಮ ನಿಗಮವಾಗಿದ್ದು, ಇತ್ತೀಚೆಗೆ ತನ್ನ ವಾಹನ ಸಮೂಹಕ್ಕೆ ‘ಕರ್ನಾಟಕ ವೈಭವ’ ವಾಹನಗಳನ್ನು ಸೇರ್ಪಡೆಗೊಳಿಸಿದೆ. ಇದು ನಿಗಮದ ಮತ್ತೊಂದು ಬ್ರಾಂಡಿಂಗ್ ಪ್ರಕ್ರಿಯೆಯ ಫಲವಾಗಿದ್ದು ಇದು ಕೈಗೆಟುಕುವ ಬೆಲೆಯಲ್ಲಿ ಲಭ್ಯವಾಗುವಂತಾಗಿದೆ.

ಹೊಸದಾಗಿ ಚಾಮರಾಜನಗರ ಮತ್ತು ಪುತ್ತೂರು ವಿಭಾಗವನ್ನು ಸೃಜಿಸಲಾಗಿದೆ. ಸುಸಜ್ಜಿತವಾದ ನೂತನ 24 ಬಸ್ ನಿಲ್ದಾಣ, 14 ಘಟಕಗಳು, 4 ವಿಭಾಗೀಯ ಕಾರ್ಯಾಗಾರಗಳು ಹಾಗೂ 31 ಬಸ್ ನಿಲ್ದಾಣಗಳನ್ನು ಮೇಲ್ದರ್ಜೆಗೇರಿಸಲಾಗಿದೆ. ವಿಶೇಷ ಅಭಿವೃದ್ಧಿ ಯೋಜನೆಯಡಿ ಮೂಲಭೂತ ಸೌಕರ್ಯ ಒದಗಿಸುವ ಸಲುವಾಗಿ ಒಟ್ಟು ರೂ. 141.75 ಕೋಟಿ ವೆಚ್ಚ ಭರಿಸಲಾಗಿರುತ್ತದೆ. ಪೀಣ್ಯದಲ್ಲಿ ರೂ.32 ಕೋಟಿ ವೆಚ್ಚದಲ್ಲಿ ಸ್ಯಾಟಿಲೇಟ್ ಬಸ್ ನಿಲ್ದಾಣ ನಿರ್ಮಿಸಲಾಗುತ್ತಿದ್ದು, ಅಕ್ಟೋಬರ್ ಅಂತ್ಯಕ್ಕೆ ರೂ.23.45 ಕೋಟಿ ಕಾಮಗಾರಿ ಪೂರ್ಣಗೊಂಡಿರುತ್ತದೆ.

ಕ.ರಾ.ರ.ಸಾ.ನಿಗಮವು ಮಧ್ಯಮ ಹಾಗೂ ಸಣ್ಣ ನಗರದಲ್ಲಿ ಸಮರ್ಥನೀಯ ನಗರ ಸಾರಿಗೆ ಸೇವೆ ಒದಗಿಸುವ ಸವಾಲನ್ನು ಸ್ವೀಕರಿಸಿದ್ದು, ತುಮಕೂರು, ಹಾಸನ, ದಾವಣಗೆರೆ, ಮಂಡ್ಯ ಮತ್ತು ಕೆ.ಜಿ.ಎಫ್ ನಗರದಲ್ಲಿ ನಗರ ಸಾರಿಗೆ ಸೇವೆಯನ್ನು ಒದಗಿಸುತ್ತಿದೆ. ಬೆಂಗಳೂರು ನಗರದಲ್ಲಿ ಕೆಂಪೇಗೌಡ ಬಸ್ ನಿಲ್ದಾಣದಿಂದ ಮೈಸೂರು ರಸ್ತೆಯ ಸ್ಯಾಟಲೈಟ್ ಬಸ್ ನಿಲ್ದಾಣಗಳಿಗೆ ಸಂಪರ್ಕ ಕಲ್ಪಿಸಲು ‘ಸಂಪರ್ಕ ನಗರ ಸಾರಿಗೆ’ ಬಸ್ಸುಗಳ ಕಾರ್ಯಾಚರಣೆಯನ್ನು ಹೊಸದಾಗಿ ಪ್ರಾರಂಭಿಸಲಾಗಿದೆ.

ಮಾಹಿತಿ ತಂತ್ರಜ್ಞಾವನ್ನು ಆಡಳಿತದಲ್ಲಿ ಸಂಪೂರ್ಣ ಅನುಷ್ಠಾನಗೊಳಿಸಿದ್ದು, ಅವತಾರ್ ಯೋಜನೆಯಡಿ ಬಸ್ ಟಿಕೇಟ್ ಕಾಯ್ದಿರಿಸಲು ಮೊಬೈಲ್ ಬುಕ್ಕಿಂಗ್ ಸೇವೆಯ ಪ್ರಾರಂಭ, ಪಾರದರ್ಶಕ ನೇಮಕಾತಿಯಡಿ ತಾಂತ್ರಿಕ ಸಿಬ್ಬಂದಿ ಹಾಗೂ ಚಾಲಕ/ನಿರ್ವಾಹಕರನ್ನು ಒಳಗೊಂಡಂತೆ ಸುಮಾರು 13396 ಕ್ಕೂ ಹೆಚ್ಚಿನ ನೇಮಕಾತಿ ಹಾಗೂ ಸಾಮಾಜಿಕ ಹೊಣೆಗಾರಿಕೆಯಡಿ ಏಳನೇ ತರಗತಿವರೆಗಿನ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್, ಹೈಸ್ಕೂಲ್ ವಿದ್ಯಾರ್ಥಿನಿಯರಿಗೆ ಶೇ.25 ರಿಯಾಯಿತಿ, ಹಿರಿಯ ನಾಗರಿಕರಿಗೆ ಶೇ.25 ರಿಯಾಯಿತಿ, ಪತ್ರಕರ್ತರಿಗೆ ಉಚಿತ ಬಸ್ ಪಾಸುಗಳು, ಪದ್ಮಶ್ರೀ, ಪದ್ಮಭೂಷಣ, ಪರಮವೀರ ಚಕ್ರ, ಮಹಾವೀರ ಚಕ್ರ ಪ್ರಶಸ್ತಿ ಪಡೆದ ಗಣ್ಯರಿಗೆ ನಿಗಮದ ಬಸ್ಸುಗಳಲ್ಲಿ ಉಚಿತವಾಗಿ ಪ್ರಯಾಣಿಸುವ ಅವಕಾಶ, ಭಾರತ ಸರ್ಕಾರದಿಂದ ಶೌರ್ಯ ಪ್ರಶಸ್ತಿ ಪಡೆದ ಮಕ್ಕಳಿಗೆ 18 ವರ್ಷ ತುಂಬುವವರೆಗೆ ಸಂಸ್ಥೆಯ ನಗರ, ಸಾಮಾನ್ಯ, ವೇಗದೂತ, ಮತ್ತು ರಾಜಹಂಸ ಬಸ್ಸುಗಳಲ್ಲಿ ರಾಜ್ಯಾದ್ಯಂತ ಉಚಿತವಾಗಿ ಪ್ರಯಾಣಿಸಲು ಸೌಲಭ್ಯ ಹಾಗೂ ಇನ್ನಿತರ ವಿವಿಧ ರಿಯಾಯಿತಿ ಪಾಸುಗಳನ್ನು ಹೊಸದಾಗಿ ಪ್ರಾರಂಭಿಸಲಾಗಿದೆ.

ಸಂಸ್ಥೆಯು ಕರ್ನಾಟಕ ಸರ್ಕಾರದ ಸಕಾಲ ಯೋಜನೆಯನ್ನು ದಿನಾಂಕ 01-04-2012 ರಿಂದ ಜಾರಿಗೆ ತಂದಿದ್ದು, ಸದರಿ ಯೋಜನೆಯಡಿ ಅಕ್ಟೋಬರ್-12 ರ ಅಂತ್ಯದವರೆಗೆ 312017 ವಿದ್ಯಾರ್ಥಿಗಳಿಗೆ 2268 ವಿಕಲಚೇತನರಿಗೆ, 232 ಸ್ವಾತಂತ್ರ್ಯ ಹೋರಾಟಗಾರರಿಗೆ ಬಸ್ ಪಾಸುಗಳನ್ನು ವಿತರಿಸಲಾಗಿರುತ್ತದೆ ಹಾಗೂ ಅಪಘಾತ ಪರಿಹಾರ ನಿಧಿಯ 52 ಅರ್ಜಿಗಳನ್ನು ಇತ್ಯರ್ಥಗೊಳಿಸಲಾಗಿರುತ್ತದೆ.

17.50 ಲಕ್ಷ ವಿದ್ಯಾರ್ಥಿ ರಿಯಾಯಿತಿ 174349 ಅಂಗವಿಕಲರಿಗೆ ರಿಯಾಯಿತಿ 28415 ಅಂಧರಿಗೆ ಉಚಿತ 8585 ಸ್ವಾತಂತ್ರ್ಯ ಹೋರಾಟಗಾರರಿಗೆ ಉಚಿತ 410.60 ಲಕ್ಷ ಹಿರಿಯ ನಾಗರಿಕರಿಗೆ ಪ್ರಯಾಣ ದರದ ರಿಯಾಯಿತಿ ಸ್ವಾತಂತ್ರ್ಯ ಹೋರಾಟಗಾರರ ಪತ್ನಿ/ವಿಧವೆಯರಿಗೆ 371 ಉಚಿತ ರಿಯಾಯಿತಿ ಪಾಸುಗಳನ್ನು ನೀಡಲಾಗಿರುತ್ತದೆ.

ಕೇಂದ್ರ ಸರ್ಕಾರದ ನಗರಾಭಿವೃದ್ಧಿ ಸಚಿವಾಲಯ ಮತ್ತು World Bank -GEF ಈ ಅನುದಾನದ ಯೋಜನೆಯಡಿಯಲ್ಲಿ Intelligent Transport System ನ್ನು ಮೈಸೂರು ನಗರದಲ್ಲಿ ಇಂಟೆಲಿಜೆಂಟ್ ಟ್ರಾನ್ಸಪೋರ್ಟ್ ವ್ಯವಸ್ಥೆಯನ್ನು ರೂ.20 ಕೋಟಿ ವೆಚ್ಚದಲ್ಲಿ ಕೈಗೊಳ್ಳಲಾಗಿದ್ದು, ಇದು 500 ಬಸ್ಸುಗಳು, 105 ಬಸ್ ನಿಲ್ದಾಣಗಳು, 6 ಬಸ್ ಟರ್ಮಿನಲ್‌ಗಳು ಮತ್ತು 45 ಫ್ಲಾಟ್ ಫಾರಂಗಳನ್ನು ಒಳಗೊಂಡಿದ್ದು ಈ ಯೋಜನೆಯನ್ನು ಅನುಷ್ಠಾನಗೊಳಿಸುತ್ತಿರುವ ದೇಶದ ಪ್ರಪ್ರಥಮ ಸಾರಿಗೆ ನಿಗಮವಾಗಿದೆ. ಮೈಸೂರಿನಲ್ಲಿ Bus Day ಯನ್ನು ಪ್ರಾರಂಭಿಸಲಾಗಿದೆ.

2012-13ನೇ ಸಾಲಿಗೆ ವಿಶೇಷ ಅಭಿವೃದ್ಧಿ ಯೋಜನೆಯಡಿ ಮೂಲಭೂತ ಸೌಕರ್ಯ ಒದಗಿಸುವ ಸಲುವಾಗಿ ರೂ.20.00 ಕೋಟಿ ಅನುದಾನದಲ್ಲಿ 38 ವಿವಿಧ ಕಾಮಗಾರಿ ಕೆಲಸಗಳನ್ನೊಳಗೊಂಡಂತೆ ಕ್ರಿಯಾ ಯೋಜನೆಯನ್ನು ರೂಪಿಸಲಾಗಿರುತ್ತದೆ. ಇವುಗಳಲ್ಲಿ 3 ಹೊಸ ಬಸ್ ನಿಲ್ದಾಣ, 1 ಹೊಸ ಬಸ್ ಘಟಕದ ನಿರ್ಮಾಣ, 3 ಬಸ್ ಘಟಕಗಳನ್ನು ಹಾಗೂ 7 ಬಸ್ ನಿಲ್ದಾಣಗಳನ್ನು ಮೇಲ್ದರ್ಜೆಗೇರಿಸುವುದು ಹಾಗೂ 24 ಇತರೆ ಕಾಮಗಾರಿ ಕೆಲಸಗಳು ಒಳಗೊಂಡಿದ್ದು, ಸೆಪ್ಟೆಂಬರ್ ಅಂತ್ಯಕ್ಕೆ 21 ಕಾಮಗಾರಿ ಕೆಲಸಗಳು ಪ್ರಗತಿಯಲ್ಲಿದ್ದು, 17 ಕಾಮಗಾರಿ ಕೆಲಸಗಳು ಟೆಂಡರ್ ಹಂತದಲ್ಲಿರುತ್ತವೆ ಹಾಗೂ ರೂ.5.50 ಕೋಟಿ ವೆಚ್ಚ ಮಾಡಲಾಗಿರುತ್ತದೆ.

ಪ್ರಶಸ್ತಿ/ಪುರಸ್ಕಾರಗಳು:

ಕೆಎಸ್‌ಆರ್‌ಟಿಸಿಗೆ ಕಳೆದ ನಾಲ್ಕು ವರ್ಷಗಳಲ್ಲಿ ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಮಟ್ಟದ ಪ್ರಶಸ್ತಿ/ಪುರಸ್ಕಾರಗಳು ಲಭಿಸಿದ್ದು ಅವುಗಳಲ್ಲಿ ಪ್ರಮುಖವಾದವುಗಳು ಈ ಕೆಳಕಂಡಂತಿದೆ.

 • Transporting Karnataka State Road Transport Corporation towards Prosperity – ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಸಮೃದ್ಧಿಯ ಪಥದತ್ತ – ಅಂತರಾಷ್ಟ್ರೀಯ ಸಾರ್ವಜನಿಕ ಸಾರಿಗೆ ಸಂಸ್ಥೆಗಳ (UITP)- Political Commitment Award-2010
 • ವಿನೂತನ ಇಂಧನ ಕಾರ್ಯನೀತಿ ಹಾಗೂ ಇಂಧನ ಕ್ಷಮತೆಗಾಗಿ ಭಾರತ ಸರ್ಕಾರದ ‘Award of Excellence-2010 ಪ್ರಶಸ್ತಿ’
 • ಭಾರತದ ಸಾರ್ವಜನಿಕ ರಂಗದ ಸಂಸ್ಥೆ (Public Sector Undertakings) ಗಳಲ್ಲಿ ಮೂಲಭೂತ ಮತ್ತು ಸಾರಿಗೆ ಸೌಕರ್ಯಗಳ ಗಣನೀಯ ಸೇವೆಗಾಗಿ “India Pride ಸ್ವರ್ಣ Award-2010”.
 • ಸಾರ್ವಜನಿಕ ಉದ್ದಿಮೆ ವಲಯದಲ್ಲಿ ಅತ್ಯುತ್ತಮ ಸಾಧನೆಗಾಗಿ ಕರ್ನಾಟಕ ಸರ್ಕಾರದ ‘ಮುಖ್ಯಮಂತ್ರಿಗಳ ರತ್ನ ಪ್ರಶಸ್ತಿ’,
 • ಅವತಾರ್ ಅನುಷ್ಠಾನಕ್ಕಾಗಿ ಗೋಲ್ಡನ್ ಪೀಕಾಕ್ Innovative Service/Product ಪ್ರಶಸ್ತಿ-2010.
 • ನಿಗಮದ ಸರ್ವಾಂಗೀಣ ಅಭಿವೃದ್ಧಿಗಾಗಿ IIMM ಬೆಂಗಳೂರುರವರಿಂದ ‘Corporate Excellence’ ಪ್ರಶಸ್ತಿ.
 • Corporate leadership ಗಾಗಿ PRCI- ಪ್ರಶಸ್ತಿ-2010.
 • ಸಾರ್ವಜನಿಕ ರಂಗದಲ್ಲಿ ಅತ್ಯುತ್ತಮ ಮಾಹಿತಿ ತಂತ್ರಜ್ಞಾನ ಅನುಷ್ಠಾನಕ್ಕಾಗಿ ಭಾರತ ಸರ್ಕಾರದ ‘ರಾಷ್ಟ್ರೀಯ ಇ-ಆಡಳಿತ ಪ್ರಶಸ್ತಿ’-2009,
 • ‘ದೇಶದ ಅತ್ಯುತ್ತಮ ಬೃಹತ್ ಸೇವಾ ಉದ್ಯಮ ‘ರಾಜೀವ್‌ಗಾಂಧಿ National Quality-2009 ಪ್ರಶಸ್ತಿ’,
 • ವಿದ್ಯುನ್ಮಾನ ಚಾಲಕ ಪರೀಕ್ಷಾ ವ್ಯವಸ್ಥೆಯ ಪದ್ಧತಿಯ ಮೂಲಕ ಪ್ರತಿಶತಃ ಪಾರದರ್ಶಕತೆಯಿಂದ ಚಾಲಕರ ನೇಮಕಾತಿಗಾಗಿ ‘Award of Excellence-2009’
 • ವಿದುನ್ಮಾನ ಟಿಕೇಟ್ ಯಂತ್ರಗಳನ್ನು ಶೇಕಡ 100 ರಷ್ಟು ಬಳಕೆ ಮಾಡಿ ಆದಾಯ ಸೋರಿಕೆಯಲ್ಲಿ ಕಡಿತ ಹಾಗೂ ಟಿಕೇಟ್ ವ್ಯವಸ್ಥೆಯಲ್ಲಿ ಸಂಪೂರ್ಣ ಭದ್ರತೆ ಹಾಗೂ ನಿರ್ವಹಣೆಗಾಗಿ ‘Award of Excellence -2008’
 • ಅಂತರಾಷ್ಟ್ರೀಯ ಸಾರ್ವಜನಿಕ ಒಕ್ಕೂಟದ UITP Political Commitment ಪ್ರಶಸ್ತಿ.; ಮಧ್ಯಮ ಹಾಗೂ ಸಣ್ಣ ನಗರಗಳಾದ ತುಮಕೂರು ಮತ್ತು ಹಾಸನ ನಗರದಲ್ಲಿ ಸಮರ್ಥನೀಯ ನಗರ ಸಾರಿಗೆ ಸೇವೆ ಒದಗಿಸಿದ್ದಕ್ಕಾಗಿ ಭಾರತ ಸರ್ಕಾರದ ನಗರಾಭಿವೃದ್ಧಿ ಸಚಿವಾಲಯದ 2011ನೇ ಸಾಲಿನ ಶ್ರೇಷ್ಠ ಪ್ರಶಸ್ತಿ.
 • ನಿಗಮವು 2010-11ನೇ ಸಾಲಿನಲ್ಲಿ ರೂ.62 ಕೋಟಿ ಅತ್ಯುನ್ನತ ಲಾಭವನ್ನು ಗಳಿಸಿ ದೇಶದ ಎಲ್ಲಾ ಸಾರಿಗೆ ನಿಗಮಗಳ ಪೈಕಿ ಮೊದಲನೆ ಸ್ಥಾನ ಪಡೆದಿದ್ದಕ್ಕಾಗಿ ಎ.ಎಸ್.ಆರ್.ಟಿ.ಯು ಪುರಸ್ಕಾರ.
 • ನೂತನ ಅಮೇಜಿಂಗ್ ಮೊಬೈಲ್ ಸೇವೆಗಾಗಿ ಭಾರತ ಸರ್ಕಾರದ ವಾಣಿಜ್ಯ ಸಚಿವಾಲಯದಿಂದ National FIEO (Federation of Indian Export Organizations) Telecom Technology Award.
 • ಗಣಕೀಕೃತ ಚಾಲನಾ ಪಥ ಅಭಿವೃದ್ಧಿಗಾಗಿ ಮುಂಬೈನ ವಿಶ್ವ ಕಾಂಗ್ರೇಸ್ ಮಾನವ ಸಂಪನ್ಮೂಲ ಅಭಿವೃದ್ಧಿ ಸಂಸ್ಥೆಯಿಂದ Asia’s Best Employer ಪ್ರಶಸ್ತಿ.
 • ನಿಗಮದ ಕಾಫಿ ಟೇಬಲ್ ಬುಕ್ ’50 ವರ್ಷಗಳ ಸಾರಿಗೆ – ಬೆಳೆದುಬಂದ ದಾರಿ’ಗೆ Collateral Gold ಪ್ರಶಸ್ಥಿ ಹಾಗೂ ಸಂಸ್ಥೆಯ ಖಾಸಗಿ ಪತ್ರಿಕೆ ‘ಸಾರಿಗೆ ಸಂಪದ’ ಹಾಗೂ ‘ಸಂಸ್ಥೆಯ ಬಗ್ಗೆ ಸಾಕ್ಷ್ ಚಿತ್ರ’ ಕ್ಕೆ ಬೆಳ್ಳಿ ಪದಕ ಲಭಿಸಿರುತ್ತದೆ.
 • ಸಾರ್ವಜನಿಕ ಸೇವೆಯಲ್ಲಿ ಮಾಹಿತಿ ತಂತ್ರಜ್ಞಾನದ ಯಶಸ್ವೀ ಅನುಷ್ಠಾನಕ್ಕಾಗಿ ಪ್ರತಿಷ್ಠಿತ ರಾಷ್ಟ್ರೀಯ ಟೆಲಿಕಾಂ ಪ್ರಶಸ್ತಿ-2012 ಲಭಿಸಿರುತ್ತದೆ.
 • ಮಧ್ಯಮ ಹಾಗೂ ಸಣ್ಣ ನಗರಗಳಾದ ತುಮಕೂರು ಹಾಗೂ ಹಾಸನ ನಗರಗಳಲ್ಲಿ ಸಮರ್ಥನೀಯ ನಗರ ಸಾರಿಗೆ ಸೇವೆ ಒದಗಿಸಿದಕ್ಕಾಗಿ ಜರ್ಮನಿಯ ಇಂಟರ್ ನ್ಯಾಷನಲ್ ಟ್ರಾನ್ಸ್ ಪೋರ್ಟ್ ಫೋರಂ ಸ್ಪೆಷಲ್ ಮೆನ್ಷನ್ ಅವಾರ್ಡ್ ಲಭಿಸಿರುತ್ತದೆ.
 • ಅಂತರ್ಜಾಲದ ಮೂಲಕ ಪ್ರಯಾಣಿಕರನ್ನು ಸೆಳೆಯುವ ಉಪಕ್ರಮಗಳಿಗಾಗಿ ಡಿ.ಎಂ.ಎ.ಐ. ಸಿನರ್ಜಿ ಪ್ರಶಸ್ತಿ ಲಭಿಸಿರುತ್ತದೆ
 • ನಿಗಮವು ಪ್ರಯಾಣಿಕರನ್ನು ಆಕರ್ಷಿಸಲು ಹಮ್ಮಿಕೊಂಡಿರುವ ಸಂಖ್ಯಾಧಾರಿತ ಹಾಗೂ ಸಾಮಾಜಿಕ ಮಾರುಕಟ್ಟೆ ಆಂದೋಲನಕ್ಕೆ ಡಿಜಿರಟ್ಟಿ-2012 ಪ್ರಶಸ್ತಿ ಲಭಿಸಿರುತ್ತದೆ.

ಮೈಸೂರು ನಗರದಲ್ಲಿ ಪ್ರಥಮವಾಗಿ ತನ್ನ ಎಲ್ಲಾ ನಗರ ಸಾರಿಗೆ ಬಸ್‌ಗಳಲ್ಲಿ ಇಂಟೆಲಿಜೆಂಟ್ ಸಾರಿಗೆ ವ್ಯವಸ್ಥೆ ಅನುಷ್ಠಾನಗೊಳಿಸಿದ್ದಕ್ಕಾಗಿ ‘ಸ್ಕಾಚ್ ಡಿಜಿಟಲ್ ಇನ್‌ಕ್ಲೂಷನ್ ಸ್ವರ್ಣ ಪ್ರಶಸ್ತಿ-2012′ ಲಭಿಸಿರುತ್ತದೆ. ಇದಲ್ಲದೆ ಉತ್ತಮ ಬಸ್ ಆಪರೇಟರ್ ಪ್ರಶಸ್ತಿ, “Earth Care ಉತ್ಕೃಷ್ಟತಾ ಪುರಸ್ಕಾರ -2010″, “ಗೋಲ್ಡನ್ ಪೀಕಾಕ್ Eco-Innovation-2010 ಪ್ರಶಸಿ”, “m-Billionth South Asia Award-2010” ಪ್ರಶಸ್ತಿ, “Manthan South Asia ಪ್ರಶಸ್ತಿ-2010″, “Best Employer ಪ್ರಶಸ್ತಿ- 2010″, “ಗ್ರೀನ್ ವಾರಿಯರ್ ಪ್ರಶಸ್ತಿ-2010″, “The World is Open ಪ್ರಶಸ್ತಿ”, “Edward de Bone’s ಪ್ರಶಸ್ತಿ-2010″, “IBM Grate Mind Challengers ಪ್ರಶಸ್ತಿ-2010″, “Rasbic ಪ್ರಶಸ್ತಿ-2010″, Global HR Excellence ಪ್ರಶಸ್ತಿ-2010″, “Brathe Easy Campaign ಪ್ರಶಸ್ತಿ-2010″, Corporate Broucher ಗಾಗಿ PRCI ಪ್ರಶಸ್ತಿ-2010 ಇತ್ಯಾದಿ ಲಭಿಸಿರುತ್ತದೆ.

Leave a Reply

 

Related Websites

 • Bharatiya Janata Party
 • BJP Karnataka
 • Sri L.K. Advani
 • Sri Narendra Modi
 • Sri Ananth Kumar
 • Sri D.V. Sadananda Gowda
 • Sri Jagadish Shettar

Subscribe Newsletter


 

Share your Opinion

Please Send your valuable opinions, ideas or any queries. We welcome your Suggestions

Click Here to Submit